   ಮೂಲದೊಡನೆ ಪರಿಶೀಲಿಸಿ

ಕಾರ್ಡಿಲ್ಲೆರಾ

 ಇದು ಪ್ರಮುಖ ಪರ್ವತ ಶ್ರೇಣಿಗಳ ಒಂದು ಗುಂಪು. ಸಾಮಾನ್ಯವಾಗಿ ಖಂqz ಒಂದು ಭಾಗ. ಇಂಥ ಪ್ರದೇಶಗಳು ಹಲವಾರು ಪ್ರಸ್ಥಭೂಮಿಗಳನ್ನೂ ಸರೋವgಗಳನ್ನೂ Pಣಿವೆಗಳನ್ನೂ ಅನೇಕ ಪರ್ವತಶ್ರೇಣಗಳನ್ನೂ ಒಳಗೊಂಡಿರುತ್ತವೆ. ಉದಾಹರಣೆಗೆ ಪಶ್ಚಿಮ. ಉತ್ತರ ಅಮೆರಿಕದ ಅಲಾಸ್ಕಾದಿಂದ ಮಧ್ಯಗಿರಿಗಳ ನಡುವಿನ ಸರೋವರಗಳೂ ಕಣಿವೆಗಳೂ ಸೇರಿದಂತೆ ಇರುವ ಪ್ರದೇಶವನ್ನು ಒಂದು ಕಾರ್ಡಿಲ್ಲೆರಾ ಎಂದು ಕರೆಯಬಹುದು. ಭಾರತದ ಉತ್ತರ ಭಾಗದಲ್ಲಿರುವ ಹಿಮಾಲಯವೂ ಒಂದು ಪರ್ವತಶ್ರೇಣಿಗಳ ಗುಂಪು. ಇದು ಸಹ ಹಲವಾರು ಪರ್ವತಶ್ರೇಣಿಗಳನ್ನೂ ಶಿಖರಗಳನ್ನೂ (ಗೌರೀಶಂಕರ, ನಂದಾದೇವಿ ಇತ್ಯಾದಿ) ಸರೋವರಗಳನ್ನೂ (ಮಾನಸ ಸರೋವರ, ನೈತಿತಾಲ್ ಇತ್ಯಾದಿ) ಕಣಿವೆಗಳನ್ನೂ (ಕೈಬರ್, ಬೋಲಾನ್ ಇತ್ಯಾದಿ) ಪ್ರಸ್ಥಭೂಮಿಗಳನ್ನೂ (ಟಿಬೆಟ್ ಇತ್ಯಾದಿ) ಒಳಗೊಂಡಿದೆ. ಅಂತೆಯೇ ಇದು ಭಾರತದ ಒಂದು ಪ್ರಮುಖವಾದ ಭಾಗವೂ ಆಗಿದೆ.

 ಪ್ರಮುಖ ಭೌಗೋಳಿಕ ಲಕ್ಷಣಗಳಲ್ಲಿ ಕಾರ್ಡಿಲ್ಲೆರಾ ಒಂದು. ಸಾಮಾನ್ಯವಾಗಿ ಭೌಗೋಳಿಕವಾಗಿ ಈ ಪದವನ್ನು ಬಳಸುವರು. ಆದರೆ ಇಂಥ ಪರ್ವತಶ್ರೇಣಿಗಳ ಗುಂಪುಗಳು ಭೂಗರ್ಭಶಾಸ್ತ್ರದ ದೃಷ್ಟಿಯಿಂದ ಸಹ ಮುಖ್ಯವಾದವು. ಇವು ಭೂಮಿಯ ಪ್ರಾಯಸೂಚಕಗಳು. ಪ್ರಾಚೀನ ಕಾಲದ ಇಂಥ ಎಷ್ಟೊ ಪರ್ವತ ಶ್ರೇಣಿಗಳ ಗುಂಪುಗಳು ಶಿಥಿಲೀಕರಣಕ್ಕೊಳಗಾಗಿ ಇಂದು ಅವುಗಳ ಅವಶೇಷಗಳು ಮಾತ್ರ ಜಗತ್ತಿನ ಎಲ್ಲ ಭಾಗಗಳಲ್ಲೂ ಕಾಣುತ್ತಿವೆ. ಈಗ ನಮಗೆ ಕಾಣುತ್ತಿರುವ ಎಲ್ಲ ಮಹಾ ಪರ್ವತಶ್ರೇಣಿಗಳೋ ಅವುಗಳ ಗುಂಪುಗಳು ತೀರ ಈಚೆಗೆ ಉದ್ಭವವಾದವು (ಉದಾಹರಣೆಗೆ ಹಿಮಾಲಯ). ಈ ಪರ್ವತಶ್ರೇಣಿಗಳ ಗುಂಪುಗಳು ಪ್ರಾಚೀನ ಕಾಲದಲ್ಲಾದ ಮಹಾ ಭೂಚಲನೆಗಳನ್ನೂ ಸೂಚಿಸುತ್ತವೆ. ಇಂಥ ಚಲನೆಗಳಿಂದಾಗಿ ಒಂದು ಕಾಲದಲ್ಲಿ ಸ್ವಲ್ಪವೂ ಮಡಿಕೆಗಳಿಲ್ಲದ ಓರೆಯಿಲ್ಲದ ಜಲಜಶಿಲಾ ಪದರುಗಳು ಸುತ್ತುಮುತ್ತಲಿನ ಒತ್ತಡದಿಂದಾಗಿ ಮಡಿಕೆಗಳಿಗೊಳಗಾಗಿ ಇಂದು ಪರ್ವತ ಶ್ರೇಣಿಗಳಾಗಿವೆ. ಸಾಮಾನ್ಯವಾಗಿ ಈ ಪರ್ವತಶ್ರೇಣಿಗಳ ಗುಂಪುಗಳ ಒಳಭಾಗದಲ್ಲಿ ಅಗ್ನಿಶಿಲೆಗಳಿರುತ್ತವೆ. ಹೀಗೆ ಮಡಿಕೆಗಳುಂಟಾದಾಗ ಕೆಲವು ಭಾರಿ ದೊಡ್ಡ ದೊಡ್ಡ ಬಿರುಕುಗಳುಂಟಾಗಿ ಅವುಗಳ ಮೂಲಕ ಶಿಲಾರಸ ಹೊರಕ್ಕೆ ಚಿಮ್ಮಿ ಜ್ವಾಲಾಮುಖಿಗಳುಂಟಾಗುವುವು. ಇಂಥ ಸನ್ನಿವೇಶಗಳನ್ನು ಅನೇಕ ಪರ್ವತಶ್ರೇಣಿಗಳಲ್ಲಿ ಕಾಣಬಹುದು. ಇದರೊಂದಿಗೇ ಅನೇಕ ಜ್ವಾಲಾಮುಖಿ ಗುಡ್ಡಗಳನ್ನೂ ಅವುಗಳಿಂದುಂಟಾದ ಸರೋವರಗಳನ್ನೂ ಶಿಲಾರಸ ಶಿಲೆಗಳನ್ನೂ ಅನೇಕ ಪರ್ವತಶ್ರೇಣಿಗಳಲ್ಲಿ ಕಾಣಬಹುದು. ಈ ಪರ್ವತಶ್ರೇಣಿಗಳ ಗುಂಪಿನಲ್ಲಿ ವಿವಿಧ ಪರ್ವತಶ್ರೇಣಿಗಳು ಯಾವುದೇ ದಿಶೆಯನ್ನು ಅನುಸರಿಸಿದರೂ ಒಟ್ಟಾಗಿ ಈ ಸಮುದಾಯ ಒಂದು ನಿರ್ದಿಷ್ಟವಾದ ಸಾಮಾನ್ಯ ದಿಶೆಯನ್ನು ಅನುಸರಿಸುತ್ತವೆ. ಅಂತೆಯೇ ಇದು ಸಾಮಾನ್ಯವಾಗಿ ಒಂದು ಪಟ್ಟೆಯಂತಿದ್ದು ಭೂಪಟದಲ್ಲಿ ಸಹ ಹಾಗೆಯೇ ಕಾಣುತ್ತದೆ. ಅಲ್ಲದೇ ಇದು ಒಂದು ಖಂಡದ ಪ್ರಮುಖ ಪರ್ವತಾಕ್ಷವಾಗಿರುತ್ತದೆ.

 

(ಎಸ್.ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ